ಸೈಮನ್ ಆಯೋಗವು ಭಾರತದಲ್ಲಿ ಸ್ಥಾಪಿಸಲಾಗುವ ಸಂವಿಧಾನದ ರಚನೆಯ ಬಗ್ಗೆ ಚರ್ಚೆ ನಡೆಸಲು ಬಂದ ಏಳು ಬ್ರಿಟಿಷ್ ಸಂಸತ್ಸದಸ್ಯರ ತಂಡ. ತಂಡದ ಅಧ್ಯಕ್ಷತೆ ವಹಿಸಿದ್ದ ಸರ್ ಜಾನ್ ಸೈಮನ್ ಅವರ ಹೆಸರಿನಲ್ಲಿ ಈ ಆಯೋಗ ಜನಪ್ರಿಯವಾಯಿತು. ಕಾಕತಾಳೀಯ(?)ವಾಗಿ ಆಯೋಗದ ಒಬ್ಬ ಸದಸ್ಯ ಕ್ಲೆಮೆಂಟ್ ಆಟ್ಲೀ ಬ್ರಿಟಿಷ್ ಸರಕಾರದಿಂದ ಭಾರತ ಮತ್ತು ಪಾಕಿಸ್ತಾನಗಳು ಸ್ವಾತಂತ್ರ್ಯ ಪಡೆಯುವಾಗ ಬ್ರಿಟನ್ನಿನ ಪ್ರಧಾನ ಮಂತ್ರಿಯಾಗಿದ್ದನು. == ವಿವಾದ == ಆದರೆ ಈ ಆಯೋಗದಲ್ಲಿ ಒಬ್ಬ ಭಾರತೀಯನೂ ಇಲ್ಲದಿದ್ದದ್ದನ್ನು ಕಂಡು ಕೆಂಡಾಮಂಡಲರಾದರು ಭಾರತೀಯರು. ಈ ಕಾರಣದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಈ ಆಯೋಗವನ್ನು ಬಹಿಷ್ಕರಿಸಲು ನಿರ್ಧರಿಸಿತು. ಮುಸ್ಲಿಂ ಲೀಗ್ ಪಕ್ಷದ ಒಂದು ಬಣ ಮೊಹಮ್ಮದ್ ಅಲಿ ಜಿನ್ನಾ ನೇತೃತ್ವದಲ್ಲಿ ಬಹಿಷ್ಕಾರಕ್ಕೆ ಬೆಂಬಲ ಸೂಚಿಸಿತು. ಫೆಬ್ರವರಿ ೩, ೧೯೨೮ರಂದು ಮುಂಬಯಿಗೆ ಬಂದಿಳಿದ ಆಯೋಗ ಪ್ರದರ್ಶನಕಾರರ ಧಿಕ್ಕಾರದ ಘೋಷಣೆಗಳನ್ನು ಎದುರಿಸಬೇಕಾಯಿತು. ಇಡೀ ದೇಶ ಹರತಾಳದಲ್ಲಿರುವಂತೆ ಕಂಡು ಬಂದಿತು. == ಪರಿಣಾಮ == ಆಯೋಗವು ತನ್ನ ೧೭ ಸಂಪುಟಗಳ ವರದಿಯನ್ನು ೧೯೩೦ರಲ್ಲಿ ಪ್ರಕಾಶಿಸಿತು. ಪ್ರಾದೇಶಿಕ ಪ್ರತಿನಿಧಿತ್ವ ಮತ್ತು ಹಿಂದೂ-ಮುಸ್ಲಿಮರಿಗೆ ಪ್ರತ್ಯೇಕ ಕೋಮು ಆಧರಿತ ಚುನಾವಣೆ ಪ್ರಕ್ರಿಯೆಗಳನ್ನು ಶಿಫಾರಸು ಮಾಡಿತು. ಸೈಮನ್ ಆಯೋಗ ಪರಿಣಾಮವಾಗಿ ೧೯೩೫ರ ಭಾರತ ಸರಕಾರ ಕಾಯ್ದೆ ಹೊರಬಂದು, ೧೯೩೭ರಲ್ಲಿ ನಡೆದ ಪ್ರಾಂತೀಯ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಬಹುತೇಕ ಎಲ್ಲ ಪ್ರಾಂತ್ಯಗಳಲ್ಲಿ ಬಹುಮತದಿಂದ ಆಯ್ಕೆಯಾಗಿತು. ನಂತರ ಸ್ವತಂತ್ರ ಭಾರತದ ಸಂವಿಧಾನದ ಮೇಲೆಯೂ ಈ ಆಯೋಗದ ಪ್ರಭಾವವಿದ್ದಿತು. == ಹೊರಗಿನ ಸಂಪರ್ಕಗಳು == ಸೈಮನ್ ಆಯೋಗದ ಬಹಿಷ್ಕಾರ ಸೈಮನ್ ಆಯೋಗ